About Us

ಸ್ಥಾಪನೆ : 1997

ಸಪ್ತರ್ಷಿ ಸೌಹಾರ್ದ ಪತ್ತಿನ ಸಹಕಾರಿಯ ಸ್ಥಾಪನೆಯ ಉದ್ದೇಶ

ಸಮಾಜದ ಕೆಳಸ್ತರದಲ್ಲಿರುವ ವರ್ಗದವರ ಹಣಕಾಸು ಕೊರತೆಗಳಿಗೆ ಸ್ಪಂದಿಸುವುದು ಸ್ವಾವಲಂಬಿಯಾಗುವ ಜನಾಂಗಕ್ಕೆ ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸುವುದು ಹಾಗೂ ಸಮಾಜದ ಆರ್ಥಿಕ ದುರ್ಬಲರಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ಇತಿಮಿತಿಯಲ್ಲಿ ಅವರ ಆರ್ಥಿಕ ಅವಶ್ಯಕತೆಯನ್ನು ಪೂರೈಸುವುದು ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ವೃದ್ದರಿಗೆ ನೆರವು ನೀಡುವ ದೃಷ್ಟಿಯಿಂದ ಈ ಸಹಕಾರ ಸಂಘವನ್ನು ಪ್ರಾರಂಭಿಸಲು ಸಮಾನ ಚಿಂತನೆಯಲ್ಲಿ ಸಭೆಸೇರಿ ಸಮಾಜದ ಕೆಲವು ಸದಸ್ಯರು ಚಿಂತನೆ ನಡೆಸಿ ಮೇಲಿನ ಉದ್ದೇಶಗಳನ್ನು ಸಫಲಗೊಳಿಸುವ ದೃಷ್ಟಿಯಿಂದ ಒಂದು ಸಹಕಾರ ಸಂಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಿದರು.

ಈ ಸಭೆಯಲ್ಲಿ ಸಮಾನಚಿಂತನೆಯ ಕೆಲವು ವ್ಯಕ್ತಿಗಳು ಇದರ ನೇತೃತ್ವ ವಹಿಸಲು ತೀರ್ಮಾನಿಸಿ 15ಜನರ ಒಂದು ತಂಡವನ್ನು ರಚಿಸಿ ಅದರ ಜವಾಬ್ದಾರಿಯನ್ನು ಶ್ರೀ ಬಿ.ಎಸ್.ನಾಗರಾಜರಾವ್ ಇವರನ್ನು ಮುಖ್ಯಸ್ಥರಾಗಿ/ನಾಯಕರನ್ನಾಗಿ ತೀರ್ಮಾನಿಸಲಾಯಿತು. ಇವರ ನೇತೃತ್ವದಲ್ಲಿ ಹಲವು ಸಭೆಗಳು ನಡೆದು ರೂಪುರೇಷೆಗಳನ್ನು ಸಿದ್ದಪಡಿಸಿ ಸರಕಾರದ ಸಹಕಾರಿ ಇಲಾಖೆಯವರ ಸಲಹೆ ಪಡೆಯಲಾಯಿತು. ಅವರ ಸಲಹೆಯಂತೆ ಸಹಕಾರಿ ಕಾಯ್ದೆ 1959ರ ಅನ್ವಯ ಸಹಕಾರಿ ಸಂಘವನ್ನು ರಚಿಸಲು ತೀರ್ಮಾನಿಸಿ ಈ ಸಂಘಕ್ಕೆ ‘ಸಪ್ತರ್ಷಿ ಸೌಹಾರ್ದ ಪತ್ತಿನ ಸಹಕಾರ ಸಂಘ’ ಮತ್ತು ಇದಕ್ಕೆ ಒಳನಿಯಮಗಳನ್ನು ರಚಿಸಿ ಸಹಕಾರ ಇಲಾಖೆಗೆ ಸಲ್ಲಿಸಿ ಷೇರು ಹಣವನ್ನು ಸಂಗ್ರಹಿಸಲು ಅನುಮತಿ ಪಡೆಯಲಾಯಿತು.

ಸಹಕಾರ ಇಲಾಖೆಯ ಸಲಹೆ ಮತ್ತು ಸೂಚನೆಯಂತೆ ಮುಖ್ಯಪ್ರವರ್ತಕರಾಗಿ ಶ್ರೀ ಬಿ.ಎಸ್.ನಾಗರಾಜರಾವ್ ಮತ್ತು ಇತರ 12ಜನರನ್ನು ಪ್ರವರ್ತಕರಾಗಿ ಷೇರುಹಣ ಸಂಗ್ರಹಿಸಲು ಕಾರ್ಯೋನ್ಮುಖರಾಗಿ ಸುಮಾರು ಎರಡು ವರ್ಷಗಳ ಸಮಯದಲ್ಲಿ ವಿವಿಧ ವ್ಯಕ್ತಿಗಳನ್ನು ಭೇಟಿಮಾಡಿ ಉದ್ದೇಶತಿಳಿಸಿ ಸುಮಾರು 550 ವ್ಯಕ್ತಿಗಳನ್ನು ಷೇರು ದಾರರನ್ನಾಗಿ ನೋಂದಾಯಿಸಲಾಯಿತು.

ಈ ಪ್ರಕ್ರಿಯೆಯ ನಂತರ ಸಹಕಾರ ಇಲಾಖೆಗೆ ಅವರ ನಿರ್ದೇಶಿಸುವ ಷೇರುದಾರರನ್ನು ನೋಂದಾಯಿಸಿ ಷೇರುಹಣವನ್ನು ಎಂ.ಡಿ.ಸಿ.ಸಿ ಬ್ಯಾಂಕ್ ಇಲ್ಲಿ ಸಂದಾಯಮಾಡಿರುವ ಬಗ್ಗೆ ಗಮನಕ್ಕೆ ತರಲಾಯಿತು. ಈ ಸಹಕಾರ ಸಂಘವನ್ನು ನೋಂದಾಯಿಸಲು ಮನವಿ ಮಾಡಲಾಯಿತು.

ಸರಕಾರದ ಅದೇಶದಂತೆ ನೋಂದಾಯಿತವಾದ ನಂತರ ಎಲ್ಲಾ ಷೇರು ಸದಸ್ಯರಿಗೆ ಮಾಹಿತಿನೀಡಿ ದಿನಾಂಕ 07.02.1997ರಂದು ಸಂಘದ ಪ್ರಥಮ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಮುಖ್ಯ ಪ್ರವರ್ತಕರಾಗಿ ಹಾಗೂ ಪ್ರವರ್ತಕರಾಗಿ ಈ ಕೆಳಕಂಡ ವ್ಯಕ್ತಿಗಳನ್ನು ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕರಾಗಿ ನೇಮಿಸಲಾಯಿತು.

  1. ಬಿ.ಎಸ್.ನಾಗರಾಜರಾವ್(ಅಧ್ಯಕ್ಷರು),
  2. ಎಸ್.ವೇಣುಗೋಪಾಲ್,
  3. ಎಸ್.ಅಚ್ಚುತ,
  4. ಕೆ.ದೇವಪ್ರಕಾಶ್,
  5. ವಿ.ವೆಂಕಟೇಶ್,
  6. ಸುಬ್ರಹ್ಮಣ್ಯ ಎನ್,
  7. ಸತ್ಯನಾರಾಯಣ ವಿ,
  8. ಕಾಳಪ್ಪ,
  9. ಎಂ.ಎಸ್.ರವೀಂದ್ರ,
  10. ಎನ್.ಶ್ರೀಕಂಠಕುಮಾರ್,
  11. ಲಲಿತಾ ನಾಗರಾಜ್,
  12. ಕೃಷ್ಣವೇಣಿಪ್ರಸಾದ್,
  13. ಎಂ.ಎಸ್.ಚಂದ್ರಶೇಖರ್,
  14. ಆರ್.ಸುಂದರಮೂರ್ತಿ.

ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿ ಶ್ರೀ ಎಸ್.ಆದಿಶೇಷ ನೌಕರರಾಗಿ ಶ್ರೀ ಶ್ರೀಧರ, ಶ್ರೀಮತಿ ಶೈಲಜ, ಶ್ರೀ ಚಂದ್ರಶೇಖರ್ ಇವರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಯಿತು.
1999ರಲ್ಲಿ ಸರಕಾರದ ಆದೇಶದಂತೆ ನಿರ್ದೇಶಕರ ಸಂಖ್ಯೆಯನ್ನು ಕಡಿತಗೊಳಿಸಿ ಸಹಕಾರಿ ಸಂಘಕ್ಕೆ ನಡೆದ ಪ್ರಥಮ ಚುನಾವಣೆ ನಡೆದ ಸಂದರ್ಭದಲ್ಲಿ ಈ ಕೆಳಕಂಡ ಸದಸ್ಯರು ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ.

  1. ಬಿ.ಎಸ್.ನಾಗರಾಜರಾವ್,
  2. ಎಸ್.ವೇಣುಗೋಪಾಲ್,
  3. ಎಂ.ಎಸ್.ರವೀಂದ್ರ,
  4. ಎನ್.ಶ್ರೀಕಂಠಕುಮಾರ್,
  5. ಎಸ್.ಶ್ಯಾಮಲ,
  6. ಕೃಷ್ಣವೇಣಿಪ್ರಸಾದ್,
  7. ಕಾಳಪ್ಪ,
  8. ಟಿ.ವಿ.ಸತ್ಯನಾರಾಯಣ,
  9. ಎಸ್.ಅಚ್ಚುತ,
  10. ಆರ್.ನಾಗಶಯನ,
  11. ಎಂ.ಎಸ್.ಚಂದ್ರಶೇಖರ್.

ಸಹಕಾರಿಗೆ ಸಂಘದಿಂದ ಯಾವುದೇ ಅಡೆತಡೆಗಳಿಲ್ಲದೆ ಸದೃಡವಾಗಿ ನಿರ್ವಹಿಸುವ ಮತ್ತು ನಿಯಂತ್ರಿಸುವ ಕಾಯ್ದೆಯನ್ನು ಸರಕಾರ 1999ರಲ್ಲಿ ಜಾರಿಗೆ ತಂದಿದ್ದು ನಾವು ಸಹ 2004ರಲ್ಲಿ ಈ ಸಹಕಾರಿ ಸಂಘವು 1959ರ ಕಾಯ್ದೆಯಲ್ಲಿ 2001ರ ಕರ್ನಾಟಕ ಸಹಕಾರಿ ಕಾಯ್ದೆಗೆ ಪರಿವರ್ತನೆಯಾಗಿ ಕಾರ್ಯನಿರ್ವಹಿಸುತ್ತಿರುತ್ತದೆ. ಈ ಸಹಕಾರಿ ಸಂಘವು ಒಂದು ಸ್ವಾಭಿಮಾನಿ ಸಹಕಾರಿ ಸಂಘವಾಗಿದ್ದು ಸದಸ್ಯತ್ವ ನಿರ್ವಹಿಸುವ( ಕಾಯ್ದೆ ಅನುಸಾರ) ಸಂಘವಾಗಿರುತ್ತದೆ.

ನಮ್ಮ ಸಹಕಾರಿಯನ್ನು ಎರಡು ಬಾರಿ ಶ್ರೇಷ್ಠ ಸಹಕಾರಿ ಸಂಘವೆಂದು ಗುರುತಿಸಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಿಂದ ಸಹಕಾರಿ ಸಪ್ತಾಹದಲ್ಲಿ ಅಭಿನಂದಿಸಿರುತ್ತಾರೆ

1999-2004ರಲ್ಲಿ ಸಹಕಾರಿ ಸಂಘವು ಒಂದು ಸಿ.ಎ ನಿವೇಶನವನ್ನು ಪಡೆದಿರುತ್ತದೆ ಹಾಗೂ ತನ್ನದೇ ಆದ ಒಂದು ಸ್ವಂತ ನಿವೇಶನವನ್ನು ಜಯನಗರದಲ್ಲಿ ಖರೀದಿಸಿ ಕಟ್ಟಡ ನಿರ್ಮಿಸಿದ್ದು ಇಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ.

2007ರಲ್ಲಿ ಸಂಸ್ಥೆಯು ದಶಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರುತ್ತದೆ. ಹಾಗೂ 2009ರಲ್ಲಿ ಜಯನಗರ ಮೂಲಕಟ್ಟಡ ಒಂದನೇ ಅಂತಸ್ತನ್ನು ನಿರ್ಮಿಸಿ ಒಂದು ಉತ್ತಮ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿರುತ್ತದೆ.

ಸಹಕಾರಿಯೂ 1997 ರಲ್ಲಿ 1109 ಸದಸ್ಯರಿಂದ ಷೇರು ಬಂಡವಾಳವನ್ನು ಹೊಂದಿ 2022ರಲ್ಲಿ ಸದಸ್ಯರಿಂದ ಷೇರು ಬಂಡವಾಳವನ್ನು ಸಂಗ್ರಹಿಸಿದ್ದು ಉತ್ತಮ ಪ್ರಗತಿಯನ್ನು ಹೊಂದಿರುತ್ತದೆ. ಹಾಗೂ ಪ್ರಾರಂಭದಿಂದ ತಹಲ್‍ವರೆಗೆ ಪ್ರತಿ ಸಾಲಿನಲ್ಲಿ ತನ್ನ ಲಾಭವನ್ನು ಅಭಿವೃದ್ದಿಮಾಡಿಕೊಂಡು ತನ್ನ ಸದಸ್ಯರಿಗೆ ಲಾಭಾಂಶವನ್ನು ನೀಡುತ್ತ ಬಂದಿರುತ್ತದೆ. ಹಾಗೂ ಪ್ರತಿಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ‘ಎ’ ಶ್ರೇಣಿಯ ಮಾನ್ಯತೆ ಪಡೆದುಕೊಂಡಿರುತ್ತದೆ.